ಲಿನ್ ಡಾನ್( ಫುಜಿಯನ್ ಅಕ್ಟೋಬರ್ 14 , 1983 ರಂದು ಜನನ) ಚೀನಾ ದೇಶದ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರ. ಇವರು ಎರಡು ಬಾರಿ ಒಲಿಂಪಿಕ್ , ಐದು ಬಾರಿ ವಿಶ್ವ ಚಾಂಪಿಯನ್ ಮತ್ತು ಐದು ಬಾರಿ ಆಲ್ ಇಂಗ್ಲೆಂಡ್ ಚಾಂಪಿಯನ್ ಪಟ್ಟ ಗಳಿಸಿದ್ದಾರೆ. ಡಾನ್ ರನ್ನು ಜಗತ್ತಿನೆಲ್ಲೆಡೆ ಸಾರ್ವಕಾಲಿಕ ಶ್ರೇಷ್ಠ ಬ್ಯಾಡ್ಮಿಂಟನ್ ಆಟಗಾರನೆಂದೇ ಪರಿಗಣಿಸಲಾಗುತ್ತದೆ. ತನ್ನ 28 ನೇ ವಯಸ್ಸಿನವರೆವಿಗೆ ಬ್ಯಾಡ್ಮಿಂಟನ್ ಜಗತ್ತಿನ " ಸೂಪರ್ ಗ್ರ್ಯಾಂಡ್ ಸ್ಲ್ಯಾಮ್ " ಎನ್ನಲಾಗುವ ಎಲ್ಲ ಒಂಬತ್ತು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಒಲಿಂಪಿಕ್ ಕ್ರೀಡಾಕೂಟ, ವರ್ಲ್ಡ್ ಚಾಂಪಿಯನ್ಶಿಪ್ , ವಿಶ್ವ ಕಪ್ , ಥಾಮಸ್ ಕಪ್ , ಸುದಿರ್ಮನ್ ಕಪ್ , ಸೂಪರ್ ಸೀರಿಸ್ ಮಾಸ್ಟರ್ಸ್ ಫೈನಲ್ಸ್ , ಆಲ್ ಇಂಗ್ಲೆಂಡ್ ಓಪನ್ , ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್ಷಿಪ್ ಗಳನ್ನು ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿರುವ ಮೊದಲ ಮತ್ತು ಏಕೈಕ ಆಟಗಾರರೆನಿಸಿಕೊಂಡಿದ್ದಾರೆ. ಇವರು 2008 ಮತ್ತು 2012 ರಲ್ಲಿ ಜರುಗಿದ ಒಲಿಂಪಿಕ್ ಆಟೋಟದಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿಕೊಂಡ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ತಮ್ಮ ಅಭಿಮಾನಿಗಳಿಂದ " ಸೂಪರ್ ಡಾನ್ " ಎಂದೂ ಕರೆಯಿಸಿಕೊಳ್ಳುತ್ತಿದ್ದಾರೆ. == ವೈಯಕ್ತಿಕ ಜೀವನ == ಆರಂಭಿಕ ವರ್ಷಗಳಲ್ಲಿ ಹೆತ್ತವರು ಲಿನ್ ಗೆ ಪಿಯಾನೋ ಕಲಿಯಲು ಪ್ರೋತ್ಸಾಹಿಸಿದರು. ಆದರೆ ಐದನೆಯ ವಯಸ್ಸಿನಲ್ಲಿಯೇ ಲಿನ್ ಮನಸ್ಸು ಬ್ಯಾಡ್ಮಿಂಟನ್ ಆಟದದೆಡೆಗೆ ಸೆಳೆಯಿತು ಮತ್ತು ಅದನ್ನೇ ಆಯ್ಕೆ ಮಾಡಿಕೊಂಡರು. ಡಾನ್ ತನ್ನ 13 ನೇ ವಯಸ್ಸಿನಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಕ್ರೀಡಾ ತಂಡವನ್ನು ಸೇರಿದರು ಮತ್ತು ಅಲ್ಲಿಂದ 18 ವರ್ಷದವರರೆವಿಗೂ(2001 ರ ವರೆಗೆ) ಚೀನಾ ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ಸದಸ್ಯರಾಗಿದ್ದರು. ಮುಂದೆ ಥಾಮಸ್ ಕಪ್ ಗಾಗಿ ನೇಡೆಯುತ್ತಿದ್ದ ಅಭ್ಯಾಸ ಪಂದ್ಯಾವಳಿಯಲ್ಲಿ ತನ್ನ ತಂಡದ ಮತ್ತು ವರದಿಗಾರರ ಮುಂದೆ ತಂಡದ ತರಬೇತುದಾರ ಜಿ ಮೇಲೆ ಯಾವುದೋ ಕಾರಣಕ್ಕಾಗಿ ಹಲ್ಲೆ ಮಾಡಿದ್ದು (ಏಪ್ರಿಲ್ 10 , 2008 ರಂದು) ವಿವಾದವನ್ನೇ ಸೃಷ್ಟಿಸಿತು. ಈ ಘಟನೆಯ ನಂತರ ಲಿನ್ ಥಾಮಸ್ ಕಪ್ ಪಂದ್ಯಾವಳಿಗಳಲ್ಲಿ ತನ್ನ ತಂಡದ ಸದಸ್ಯರು ಮತ್ತು ತರಬೇತುದಾರರೊಂದಿಗೆ ಸಂತೋಷವಾಗಿರಲಿಲ್ಲ ಎಂಬ ಸುದ್ದಿಯೂ ಹಬ್ಬಿತ್ತು. 2003 ರಲ್ಲಿ ಲಿನ್ ಡಾನ್ ಅವರು ಎಕ್ಸಿಸ್ ರೊಂದಿಗೆ (ಮಾಜಿ ವಿಶ್ವ ಚಾಂಪಿಯನ್ ಬ್ಯಾಡ್ಮಿಂಟನ್ ಆಟಗಾರ್ತಿ) ಪ್ರಣಯ ಸಂಬಂಧವನ್ನಿಟ್ಟುಕೊಂಡಿದ್ದಾರೆ ಎಂಬ ಸುದ್ದಿಯೂ ಹಬ್ಬಿತು . ಈ ಸುದ್ದಿಯನ್ನು ಎಕ್ಸಿಸ್ ಮೊದಮೊದಲು ನಿರಾಕರಿಸಿದರೂ ನಂತರ ಲಿನ್ ಜತೆಗಿನ ತನ್ನ ಪ್ರೇಮ ಸಂಬಂಧವನ್ನು ಒಪ್ಪಿಕೊಂಡರು. ಆದರೆ ಲಿನ್ ಡಾನ್ ಮಾಧ್ಯಮದವರೆದೆರು ಸಿಟ್ಟಿನಿಂದ ಪ್ರತಿಕ್ರಿಯೆ ನೀಡಿ, ತನ್ನ ಮತ್ತು ಎಕ್ಸಿಸ್ ನಡುವಿನ ಸಂಬಂಧ ವೈಯಕ್ತಿಕ ವಿಚಾರ ಎಂದು ಹೇಳಿ ಗಾಳಿಸುದ್ದಿಗಳಿಗೆ ಮುಕ್ತಾಯ ಹೇಳಿದರು. ಮುಂದೆ ಸೆಪ್ಟೆಂಬರ್ 23 , 2012 ರಂದು ಲಿನ್ ಮತ್ತು ಎಕ್ಸಿಸ್ ಬೀಜಿಂಗ್ ತಾಂತ್ರಿಕ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಮದುವೆಯಾದರು. == ವೃತ್ತಿಜೀವನ == === ಕಿರಿಯನಾಗಿದ್ದಾಗಿನ ಘಟನೆಗಳು === 2000 ದನೆಯ ಇಸವಿಯಲ್ಲಿ ಜರುಗಿದ ಏಷ್ಯನ್ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ತಂಡ ಮತ್ತು ಬಾಲಕರ ಸಿಂಗಲ್ಸ್ ಎರಡರಲ್ಲೂ ಲಿನ್ ವಿಜಯಿಯಾಗಿ ಹೊರಹೊಮ್ಮಿದರು. ಮುಂದೆ ಇದೇ ವರುಷ ನೆಡೆದ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಸೆಮಿ ಫೈನಲ್ ತಲುಪಿದ ಚೀನೀ ತಂಡದ ಸದಸ್ಯರಲ್ಲಿ ಲಿನ್ ಕೂಡಾ ಇದ್ದರು. === 2001-2003 === 2001 ನೆಯ ಇಸವಿಯು ಲಿನ್ ರ ವೃತ್ತಿಜೀವನದ ಹೆಗ್ಗುರುತಾಯಿತು. ತನ್ನ ಮೊದಲ ಪಂದ್ಯವಾದ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಅವರು ತನ್ನ ದೇಶದವರಾದ ಕ್ಸಿಯಾ ಎದುರು ಅಂತಿಮ ಹಂತದಲ್ಲಿ ಮುಗ್ಗರಿಸಿದರು. ಆದರೆ, ಮುಂದೆ 2002 ರಲ್ಲಿ ಕೊರಿಯಾ ಓಪನ್ ನಲ್ಲಿ ತಮ್ಮ ಮೊದಲ ಪ್ರಶಸ್ತಿಯನ್ನು ಪಡೆದರು. . 2002 ರಲ್ಲಿ ಜರುಗಿದ ಥಾಮಸ್ ಕಪ್ ಚಾಂಪಿಯನ್ಶಿಪ್ ನಲ್ಲಿ, ಸ್ವೀಡನ್ ( 5-0 ) (3–2), , ಡೆನ್ಮಾರ್ಕ್ ( 3-2 ) , ಮತ್ತು ಕೊರಿಯಾ ದೇಶದ ತಂಡಗಳನ್ನು ಸೋಲಿಸಿ ಸೆಮಿಫೈನಲ್ಸ್ ತಲುಪಿದ ಚೀನಾ ದೇಶದ ತಂಡದಲ್ಲಿ ಲಿನ್ ಕೂಡಾ ಇದ್ದರು. ಆದರೆ, ವೈಯಕ್ತಿಕ ಕಾರಣಗಳಿಂದ ಲಿನ್ ಸೆಮಿಫೈನಲ್ ನಲ್ಲಿ ಮಲೇಶಿಯ ವಿರುಧ್ಧ ಆಡಲಿಲ್ಲ. ಈ ಪಂದ್ಯದಲ್ಲಿ ಚೀನಾ ತಂಡವು 1-3 ರಿಂದ ಮಲೇಶ್ಯಾ ಎದುರು ಸೋತಿತು. ಮುಂದೆ ಲಿನ್ ಆಡಿದ ಇತರೆ ನಾಲ್ಕು ಪಂದ್ಯಾವಳಿಗಳಲ್ಲಿ ಚೀನಾ ತಂಡವು ಜಯಗಳಿಸಿತು. ಆದರೆ, ಸಿಂಗಪುರ ಸಿರೀಸ್ ಮತ್ತು ಇಂಡೋನೇಶ್ಯಾ ಓಪನ್ ಆಟೋಟಗಳಲ್ಲಿ ಮೊದಲ ಸುತ್ತಿನಲ್ಲಿಯೇ ಸೋಲುಂಡರು. ಮುಂದೆ ಡೆನ್ಮಾರ್ಕ್ ಓಪನ್ ನ ಎರಡನೇ ಸುತ್ತಿನಲ್ಲಿ , ಮತ್ತು ಚೀನಾ ಓಪನ್ ನ ಮೂರನೆ ಸುತ್ತಿನಲ್ಲಿ ಸೋಲುಂಡರು. ಭರವಸೆ ಹುಟ್ಟಿಸಿದ್ದ ಏಷ್ಯನ್ ಗೇಮ್ಸ ನಲ್ಲಿ ತಂಡವನ್ನು ಸ್ಪರ್ಧೆಯ ಸೆಮಿಫೈನಲ್ಸ್ ವರೆವಿಗೂ ಕೊಂಡೊಯ್ದು ಅಂತಿಮ ಹಂತದಲ್ಲಿ ಮುಗ್ಗರಿಸಿದ್ದರಿಂದ ಚಿನ್ನದ ಪದಕದ ಆಸೆಯಿಟ್ಟುಕೊಂಡಿದ್ದ ಚೀನಾ ತಂಡಕ್ಕೆ ನಿರಾಸೆಯಾಯಿತು. ನಂತರ ಲಿನ್ ಡಾನ್, ಆಲ್ ಇಂಗ್ಲೆಂಡ್ ಓಪನ್ ನಲ್ಲಿ ಮೂರನೇ ಸುತ್ತಿನಲ್ಲಿ ಸೋಲುವ ಮೂಲಕ 2003 ನೇ ಇಸವಿಯ ಕ್ರೀಡಾಋತುವನ್ನು ಆರಂಭಿಸಿದರು. ಜಪಾನ್ ಓಪನ್ನಲ್ಲಿ ವರ್ಷದ ನಂತರ ಸ್ಪರ್ಧೆಯ ಫೈನಲ್ ತಲುಪಿದರೂ ಮತ್ತೊಮ್ಮೆ ತನ್ನ ದೇಶದವರೇ ಆದ ಕ್ಸಿಯಾ ಎದುರು ಸೋಲು ಕಂಡರು. ನಂತರ ಇಂಗ್ಲೆಂಡಿನ ಬರ್ಮಿಂಗ್ಹ್ಯಾಮ್ ನಲ್ಲಿ ಜರುಗಿದ ವಿಶ್ವ ಚಾಂಪಿಯನ್ಶಿಪ್ ಪಂದ್ಯಾವಳಿಗೆ ಮೊದಲ ಬಾರಿ ಕಾಲಿರಿಸಿದರು. ಮೊದಲ ಎರಡು ಸುತ್ತುಗಳಲ್ಲಿ ಹೆನ್ರಿಕ್ ಮತ್ತು Przemysław , ಅವರನ್ನು ಸೋಲಿಸಿ ಅಚ್ಚರಿ ಮೂಡಿಸಿದರು. ಆದರೆ ಮೂರನೇ ಸುತ್ತಿನ ಪಂದ್ಯದಲ್ಲಿ ಮತ್ತೆ ಕ್ಸಿಯಾ ಅವರಿಂದ ಸೋಲುಂಡರು. ಇದಾದ ನಂತರ ಸಿಂಗಪುರ ಓಪನ್ ನಲ್ಲಿ ಸೆಮಿಫೈನಲ್ಸ್ ಹಂತದಲ್ಲಿ ಸೋತರು. ಇಂಡೋನೇಷ್ಯಾ ಓಪನ್ ನ ಮೂರನೆ ಸುತ್ತಿನಲ್ಲಿ , ಮಲೇಷ್ಯಾ ಓಪನ್ ನ ಎರಡನೇ ಸುತ್ತಿನಲ್ಲಿ ಸತತ ಸೋಲುಂಡರು. ಆದರೂ, ಡೆನ್ಮಾರ್ಕ್ ಓಪನ್, ಹಾಂಗ್ ಕಾಂಗ್ ಓಪನ್, ಚೀನಾ ಓಪನ್ ಪ್ರಶಸ್ತಿಗಳನ್ನು ಗೆದ್ದು ಜರ್ಮನ್ ಓಪನ್ ನಲ್ಲಿ ರನ್ನರ್ ಅಪ್ ಆಗುವ ಮೂಲಕ ವರ್ಷವನ್ನು ಆತ್ಮವಿಶ್ವಾಸದೊಂದಿಗೆ ಕೊನೆಗೊಳಿಸಿದರು. === 2004 === ಲಿನ್ಡಾನ್ ಗೆ 2004 ನೆಯ ಇಸವಿಯು ಅದೃಷ್ಟದ ವರುಷವಾಯಿತು. ಮೊದಲ ಬಾರಿಗೆ ಒಂದನೆಯ ವಿಶ್ವ ಶ್ರೇಯಾಂಕವನ್ನು ಲಿನ್ ಅವರು ಇದೇ ವರುಷ ಗಳಿಸಿದರು. ಚೀನಾ ತಂಡವು ಥಾಮಸ್ ಕಪ್ ನ ಅರ್ಹತಾ ಸುತ್ತಿನಲ್ಲಿ ಗೆಲ್ಲಲು ಬೆನೆಲುಬಾಗಿ ನಿಂತರು. ಮುಂದೆ ಸ್ವಿಸ್ ಓಪನ್ ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಪೀಟರ್ ಗೇಡ್ ಅವರನ್ನು ಸೋಲಿಸುವ ಮೂಲಕ ತನ್ನ ಮೊಟ್ಟಮೊದಲ ಆಲ್ ಇಂಗ್ಲೆಂಡ್ ಓಪನ್ ಪ್ರಶಸ್ತಿಯನ್ನು ಗೆದ್ದರು . ಮೇ ತಿಂಗಳಿನಲ್ಲಿ ನೆಡೆಯಲಿದ್ದ ಥಾಮಸ್ ಕಪ್ ಅಭಿಯಾನಕ್ಕಾಗಿ ಜಕಾರ್ತಾ ಗೆ ಹೋಗುವ ಮೊದಲು ಜಪಾನ್ ಓಪನ್ ನ ಸೆಮಿಫೈನಲ್ ತಲುಪಿದ ಸಾಧನೆ ಮಾಡಿದರು. ಥಾಮಸ್ ಕಪ್ ನಲ್ಲಿ ಲಿನ್ ಅವರು ಯುನೈಟೆಡ್ ಸ್ಟೇಟ್ಸ್ ತಂಡವನ್ನು ಟೂರ್ನಿಯಿಂದ ಹೊರಗಟ್ಟಿದ್ದಲ್ಲದೆ ಹಾಲಿ ಚಾಂಪಿಯನ್ ಇಂಡೋನೇಷ್ಯಾ ತಂಡವನ್ನು 5 0 ಅಂತರದಲ್ಲಿ ಮಣಿಸುವ ಮೂಲಕ ಚೀನಾ ತಂಡವು ಕ್ವಾರ್ಟರ್ ಫೈನಲ್ ಪ್ರವೇಶಿಸಲು ನೆರವಾದರು. ಅನಂತರ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಗಳಲ್ಲಿ ಕ್ರಮವಾಗಿ ಜಪಾನ್ ಮತ್ತು ಕೊರಿಯಾ ತಂಡಗಳನ್ನು 3-0 ಅಂತರದಲ್ಲಿ ಮಣಿಸಿದರು . ಅಂತಿಮ ಪಂದ್ಯದಲ್ಲಿ , ೧-೩ ರ ನೇರ ಸೆಟ್ನಲ್ಲಿ ಪೀಟರ್ ಗೇಡ್ ಅವರನ್ನು ಸೋಲಿಸುವ ಮೂಲಕ ಈ ಪಂದ್ಯಾವಳಿಯಲ್ಲಿ 14 ವರ್ಷಗಳ ನಂತರ ಚಾಂಪಿಯನ್ಶಿಪ್ ಆಗುವ ಬರವನ್ನು ನೀಗಿಸಿಕೊಂಡಿತು . ಅನಂತರ ಮಲೇಷ್ಯಾ ಓಪನ್ ಕ್ವಾರ್ಟರ್ ಫೈನಲ್ ನಲ್ಲಿ ಸೋಲುವ ಮೂಲಕ ಕೊಂಚ ಹಿನ್ನಡೆ ಅನುಭವಿಸಿದರು ಮತ್ತು ಒಲಿಂಪಿಕ್ ಕ್ರೀಡೆಗಳು ಆರಂಭವಾಗುವ ಮುನ್ನ ಜುಲೈ ತಿಂಗಳಿನಲ್ಲಿ ಕಾಲಿನ ನೋವಿಗೆ ಒಳಗಾದರು .. ಒಲಂಪಿಕ್ ಕ್ರೀಡಾಕೂಟದಲ್ಲಿ ಹೀನಾಯವಾಗಿ ಸೋಲುವುದರ ಜೊತೆಗೆ "ಯಾವಾಗಲೂ ಗೆಲ್ಲುವ ಉತ್ಸಾಹದಲ್ಲೇ ಇರುತ್ತಾನೆ " ಎಂಬ ವ್ಯಂಗ್ಯವನ್ನೂ ಎದುರಿಸಿದರು . ಆದಾಗ್ಯೂ , ಡೆನ್ಮಾರ್ಕ್ , ಜರ್ಮನ್ ಮತ್ತು ಚೀನಾ ಓಪನ್ ಒಳಗೊಂಡಂತೆ ಮೂರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡು ವರ್ಷಾಂತ್ಯದಲ್ಲಿ ಇಂಡೋನೇಷ್ಯಾ ಓಪನ್ನಲ್ಲಿ ಸೆಮಿಫೈನಲ್ ತಲುಪುವುದರೊಂದಿಗೆ ೨೦೦೪ ರ ಅಭಿಯಾನವನ್ನು ಮುಗಿಸಿದರು . === 2005 === ಲಿನ್ ತನ್ನ ಎರಡನೇ ಜರ್ಮನ್ ಓಪನ್ ಮತ್ತು ಹಾಂಗ್ ಕಾಂಗ್ ಓಪನ್ ಪ್ರಶಸ್ತಿಗಳನ್ನು ಹಾಗೆಯೇ ಜಪಾನ್ ಓಪನ್ , ಚೀನಾ ಮಾಸ್ಟರ್ಸ್ , ಮತ್ತು ವಿಶ್ವ ಕಪ್ ಪಂದ್ಯಾವಳಿಯನ್ನು ಗೆಲ್ಲುವುದರ ಮೂಲಕ 2005 ರಲ್ಲಿ ಅಗ್ರ ವಿಶ್ವ ಶ್ರೇಯಾಂಕವನ್ನು ಉಳಿಸಿಕೊಂಡರು . ಸುದಿರ್ಮನ್ ಕಪ್ ನಲ್ಲಿ ಉಪಾಂತ್ಯ ಮತ್ತು ಅಂತಿಮ ಪದ್ಯದಲ್ಲಿ ಕ್ರಮವಾಗಿ ದಕ್ಷಿಣ ಕೊರಿಯಾ ಮತ್ತು ಇಂಡೋನೇಶಿಯಾ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಬಾಚಿಕೊಳ್ಳುವಲ್ಲಿ ಚೀನಾ ತಂಡಕ್ಕೆ ನೆರವಾದರು. ಲಿನ್ ತಮ್ಮ ಸಹ ಆಟಗಾರ ಚೆನ್ ಹಾಂಗ್ ಅವರೆದುರು ಮೂರು ಸೆಟ್ಗಳ ಅಂತರದಲ್ಲಿ ಸೋಲುವ ಮೂಲಕ ಆಲ್ ಇಂಗ್ಲೆಂಡ್ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ವಿಫಲವಾದರು. ಮಲೇಷ್ಯಾ ಓಪನ್ ಫೈನಲ್ನಲ್ಲಿ ಮತ್ತೊಬ್ಬ ಉದಯೋನ್ಮುಖ ಸಹ ಆಟಗಾರ ಲೀ ಚೊಂಗ್ ವೀ ಅವರೆದುರು ಸೋತು ನಿರ್ಗಮಿಸಿದರು. ತಮ್ಮ ಮೊದಲ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಕ್ಯಾಲಿಪೋರ್ನಿಯಾದಲ್ಲಿ ನೆಡೆದ ಕ್ರೀಡಾಕೂಟದಲ್ಲಿ ಅಂತಿಮ ಹಂತದವರೆವಿಗೂ ಸೋಲದೆ ಆಡಿದ ಲಿನ್ , ಅಂತಿಮ ಪಂದ್ಯದಲ್ಲಿ ಇಂಡೋನೇಶಿಯಾದ ತೌಫಿಕ್ ಹಿದಾಯತ್ ಅವರೆದುರು ಹೀನಾಯವಾಗಿ ಸೋತರು . ಮುಂದೆ ಸಿಂಗಪುರ್ ಓಪನ್ ಮತ್ತು ಚೀನಾ ಓಪನ್ ಪಂದ್ಯಗಳಲ್ಲಿ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ಸ್ ಹಂತದಲ್ಲಿ ಸೋತು ಹೊರಬಂದರು . === 2006 === ಜರ್ಮನ್ ಓಪನ್ ಪಂದ್ಯದ ಸೆಮಿಫೈನಲ್ಸ್ ಹಂತವನ್ನು ತಲುಪುವ ಮೂಲಕ ಲಿನ್ ಈ ಋತುವನ್ನು ಪ್ರಾರಂಭಿಸಿದರು. ಚೀನಾ ಮಾಸ್ಟರ್ಸ್ ಮತ್ತು ಚೀನಾ ಓಪನ್ ನಲ್ಲೂ ಕೂಡ ಉಪಾಂತ್ಯವನ್ನು ತಲುಪಿ ಗಮನಾರ್ಹ ಸಾಧನೆ ಮಾಡಿದರು. ತನ್ನ ಎದುರಾಳಿ ಲೀ ಚೋಂಗ್ ವೀ ವಿರುದ್ದ ಜೂನ್ ನಲ್ಲಿ ನೆಡೆದ ಮಲೇಷ್ಯಾ ಓಪನ್ನಲ್ಲಿ ಅಂತಿಮ ಪಂದ್ಯದಲ್ಲಿ 13 20ರ ಅಂತರದಲ್ಲಿ ಸೋತರು ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ತೌಫಿಕ್ ಹಿದಾಯತ್ ವಿರುಧ್ಧ ಸೋತರು . ಆದಾಗ್ಯೂ , ಅವರು ಋತುವಿನ ಆರು ಪ್ರತ್ಯೇಕ ಪ್ರಶಸ್ತಿಗಳನ್ನು ಗೆದ್ದರು . ಆಲ್ ಇಂಗ್ಲೆಂಡ್ ಓಪನ್ , ಚೀನೀ ತೈಪೆ ಓಪನ್ , ಮಕಾವು ಓಪನ್ , ಹಾಂಗ್ ಕಾಂಗ್ ಓಪನ್ , ಜಪಾನ್ ಓಪನ್ , ಮತ್ತು ತನ್ನ ದೇಶದವರೇ ಆದ ಬಾವೊ ಚುನ್ಲೈ ಅವರನ್ನು ಸೋಲಿಸಿ ಮೊದಲ ವಿಶ್ವ ಚಾಂಪಿಯನ್ ಪಟ್ಟವನ್ನು ವಿಶ್ವ ಚಾಂಪಿಯನ್ ಪಂದ್ಯಾವಳಿಯಲ್ಲಿ ಗಳಿಸಿಕೊಂಡರು. ಮೇ ತಿಂಗಳಿನಲ್ಲಿ , ಲಿನ್ ಮತ್ತು ಅವರ ತಂಡವು ಸತತ ಎರಡನೇ ಬಾರಿಗೆ ಡೆನ್ಮಾರ್ಕ್ ತಂಡವನ್ನು ಸೋಲಿಸುವುದರ ಮೂಲಕ ಥಾಮಸ್ ಕಪ್ ಪ್ರಶಸ್ತಿಯನ್ನು ತನ್ನಲ್ಲಿಯೇ ಉಳಿಸಿಕೊಂಡಿತು . == ಚಾಂಪಿಯನ್ ಪಟ್ಟ ಗಳಿಸಿದ ಪಂದ್ಯಗಳು == === ಪ್ರಶಸ್ತಿಗಳು(55) === == ಉಲ್ಲೇಖಗಳು ==